ಜೋಗೇನಹಳ್ಳಿ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
ಮಧುಗಿರಿ : ಭಗೀರಥ ಮಹರ್ಷಿಗಳು ಘೋರ ತಪ್ಪಸ್ಸನ್ನು ಮಾಡಿ ಛಲ ಬಿಡದೆ ಅವಿರತವಾಗಿ ಪಟ್ಟ ಶ್ರಮದಿಂದ ದೇವಗಂಗೆಯು ಕೈಲಾಸದಿಂದ ಭೂಲೋಕಕ್ಕೆ ಇಳಿಯಲು ಕಾರಣವಾಯಿತು ಇವರ ಸಾಧನೆಯು ಅಗಾಧವಾದದ್ದು ಸಾಧಕರಿಗೆ ಸ್ಪೂರ್ತಿದಾಯಕ ಅದ್ದರಿಂದ ಪ್ರತಿಯೊಬ್ಬರೂ ಭಗೀರಥರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಜೋಗೆನಹಳ್ಳಿ ಹರೀಶ್ ಗೌಡ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗೆನಹಳ್ಳಿ ಗ್ರಾಮದಲ್ಲಿ ಉಪ್ಪಾರ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಂಗೆಯನ್ನು ಭೂಮಿಗೆ ತರಲು ಭಗೀರಥ ಮಹರ್ಷಿಗಳು ಪಟ್ಟ ಶ್ರಮವನ್ನು ಈಗ ಭಗಿರಥ ಪ್ರಯತ್ನ ಮಾಡು ಎಂದು ನಾವೆಲ್ಲರೂ ಮಾತನಾಡುತ್ತಿದ್ದೇವೆ ಎಂದರೆ ಅವರು ಛಲ ಬಿಡದೆ ಹಿಡಿದ ಕೆಲಸವನ್ನು ಪೂರೈಸಿದರು ಎಂಬ ಕಾರಣಕ್ಕೆ ಮಹಾನ್ ವ್ಯಕ್ತಿಗಳನ್ನು ಜಾತಿಯ ಸಂಕೋಲೆಗಳಿಗೆ ಕಟ್ಟಿ ಹಾಕದೆ ಅವರ ಸಮಾಜಮುಖಿ ಚಿಂತನೆ ಮತ್ತು ಕೆಲಸಗಳನ್ನು ನಾವು ಅರಿತು ಸಾಗಬೇಕಿದೆ ಆವಾಗಲೇ ಆದರ್ಶ ವ್ಯಕ್ತಿಗಳಿಗೆ ನಾವು ಗೌರವಿಸಿದಂತಾಗುತ್ತದೆ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಗಮನಹರಿಸಬೇಕು. ಇದರಿಂದ ಸಮುದಾಯವು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ನಮ್ಮ ಗ್ರಾಮದಲ್ಲಿ ಎಲ್ಲಾ ಜನಾಂಗದವರು ಅಣ್ಣತಮ್ಮಂದಿರಂತೆ ಅನ್ಯೋನ್ಯತೆಯಿಂದ ಬಾಳುತ್ತಿರುವುದು ನಿಜಕ್ಕೂ ಸಂತಸ ತರುವ ವಿಚಾರವಾಗಿದ್ದು, ಎಲ್ಲರೂ ಒಂದೇ ಎಂದು ಹಳ್ಳಿಗಳಲ್ಲಿ ಬದುಕಿದಾಗ ಮಾತ್ರ ನೆಮ್ಮದಿಯನ್ನು ಕಾಣಬಹುದು ಎಂದು ತಿಳಿಸಿದರು.

ಈ ವೇಳೆ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಮೆರವಣಿಗೆ ನಡೆಸುವುದರ ಮೂಲಕ
ವಿಜೃಂಭಣೆಯಿಂದ ಆಚರಿಸಲಾಯಿತು ಮುಖಂಡರು ಯುವಕರು ಜೊತೆಗೂಡಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಹಿಳೆಯರು ಕಳಶಗಳನ್ನು ಹೊತ್ತು ಸಾಗಿದರೆ ಯುವಕರು ಉತ್ಸಾಹದಿಂದ ತಮಟೆ ವಾದ್ಯಗಳ ತಾಳಕ್ಕೆ ಕುಣಿಯುತ್ತ ಮೆರವಣಿಗೆಯಲ್ಲಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಸಂಜೀವಮೂರ್ತಿ ಜೀವಿಕಾ,ಮಧುಗಿರಿ ರಾಮಣ್ಣ,
ಗ್ರಾ.ಪಂ ಮಾಜಿ ಅಧ್ಯಕ್ಷೆ ಪಾರ್ವತಮ್ಮ ವೆಂಕಟೇಶ್,
ಉಪ್ಪಾರ ಸಂಘದ ಸದಸ್ಯರುಗಳಾದ, ಓಬಳೇಶ್, ರಾಮಕೃಷ್ಣಪ್ಪ. ಬಿ, ಚಿಕ್ಕೋಬಳಪ್ಪ, ಸಿ.ನರಸಿಂಹಯ್ಯ, ಬಿ.ನರಸಿಂಹಪ್ಪ, ವೆಂಕಟೇಶ್, ಮಂಜುನಾಥ್, ನರಸಿಂಹಮೂರ್ತಿ, ಅನಿಲ್ ಕುಮಾರ್, ನಾಗೇಂದ್ರ, ದಯಾನಂದ್, ರಂಗನಾಥ್, ಹನುಮಂತರಾಯಪ್ಪ, ಕೋಳಿ ರಾಮಾಂಜಿನಪ್ಪ, ಕದುರಪ್ಪ, ಜೆ.ಕೆ ಶಿವಕುಮಾರ್, ಶಾಂತರಾಜು, ಸಿದ್ದಪ್ಪ, ನಟರಾಜು, ಶಿವಪ್ಪ, ಜೆ ಹೆಚ್ ರವಿ ಕುಮಾರ್ ಬಾಬು, ಅಶ್ವಥ್, ಉಮೇಶ್, ವಾಟರ್ಮ್ಯಾನ್ ಹನುಮಂತಪ್ಪ, ಉಪ್ಪಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.